ಗಡಿಜಿಲ್ಲೆ ಬೆಳಗಾವಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಪುಂಡರಿಗೆ ಜಿಲ್ಲಾಡಳಿತ ತಕ್ಕ ಪಾಠ ಕಲಿಸಿದೆ. ನಿನ್ನೆಯಷ್ಟೇ ಬೆಳಗಾವಿ ನಗರದ ಕಪಿಲೇಶ್ವರ್ ಮಂದಿರದ ಬಳಿ ಉದ್ಘಾಟನೆಯಾಗಿರುವ ರೈಲ್ವೆ ಮೇಲ್ಸೆತುವೆಯ ಮೇಲೆ ಎಂಇಎಸ್ ಪುಂಡರು ಛತ್ರಪತಿ ಶಿವಾಜಿ ಮಹಾರಾಜ ರಸ್ತೆ ಬೆಳಗಾಂವ್ ಎಂದು ಮರಾಠಿ ಭಾಷೆಯಲ್ಲಿ ನಾಮ ಫಲಕ ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ವಿವಾದಿತ ನಾಮಫಲಕವನ್ನು ತೆರವುಗೊಳಿಸಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮೇಲ್ಸೆತುವೆಯ ಉದ್ಘಾಟನೆ