ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣ; ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು| pavithra| Last Modified ಮಂಗಳವಾರ, 20 ಅಕ್ಟೋಬರ್ 2020 (10:17 IST)
ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಬಗ್ಗೆ ಸ್ಪೋಟಕ ಮಾಹಿತಿಯೊಂದು ತಿಳಿದುಬಂದಿದೆ.
ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ದಾಳಿಗೆ ಮುನ್ನ ಆರೋಪಿಗಳ ಜೊತೆ ಸಂಪತ್ ರಾಜ್ ಸಂಪರ್ಕ ಹೊಂದಿದ್ದ ಎಂಬುದಾಗಿ ತಿಳಿದುಬಂದಿದೆ.> > ಸಂಪತ್ ರಾಜ್, ಆರೋಪಿಗಳ ಕರೆ ವಿವರ ಬಹಿರಂಗಗೊಂಡಿದೆ. ಘಟನೆ ದಿನ ಸಂಪತ್ ರಾಜ್ ಸಂಜೆ 6ರಿಂದ ತಡರಾತ್ರಿ 2ರವರೆಗೂ ಸಂಪರ್ಕದಲ್ಲಿದ್ದರು. ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಜತೆ  ದೂರವಾಣಿ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :