ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿ, ಇಂದು ಬಹುಮತ ಸಾಬೀತು ಪಡಿಸಿದ್ದೇ ತಡ ವಿಪಕ್ಷಗಳ ನಾಯಕರು ನೂತನ ಸಿಎಂ ವಿರುದ್ಧ ಭರ್ಜರಿಯಾಗಿ ಟಾಂಗ್ ನೀಡುತ್ತಿದ್ದಾರೆ.ಅನರ್ಹ ಶಾಸಕರು ಸಿಎಂ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ. ನೀವು ಅವರನ್ನು ಯಾವತ್ತಿಗೂ ಕೈ ಬಿಡಬೇಡಿ. ಹೀಗಂತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದಾರೆ.ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಡಿಕೆಶಿ, ಅತೃಪ್ತ ಶಾಸಕರು ನಿಮಗೆ ಸಹಕಾರ ನೀಡಿದ್ದರಿಂದ ಅನರ್ಹಗೊಂಡಿದ್ದಾರೆ. ಅವರಿಗೆ ಏನೆಲ್ಲಾ ವ್ಯವಸ್ಥೆ, ಅನುಕೂಲ ಮಾಡಿಕೊಡುತ್ತೇನೆಂದು ನೀವು