ಮುಂದೊಂದು ದಿನ ಡಿಕೆ ಶಿವಕುಮಾರ್ ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ-ಜಗದೀಶ ಶೆಟ್ಟರ್ ವಾಗ್ದಾಳಿ

ಬಳ್ಳಾರಿ, ಬುಧವಾರ, 27 ಮಾರ್ಚ್ 2019 (09:25 IST)

ಬಳ್ಳಾರಿ : ಸೊಕ್ಕಿನ ಮಾತುಗಳನ್ನಾಡುವ ಸಚಿವ ಡಿಕೆ ಶಿವಕುಮಾರ್ ಹೊರುವುದು ಖಾಯಂ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.


ಬಳ್ಳಾರಿಯ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಚಿವ ಡಿಕೆ ಶಿವಕುಮಾರ್ ಮೊದಲು ಸರಿಯಾಗಿ ಮಾತನಾಡುವುದು ಕಲಿಯಲಿ, ಸೊಕ್ಕಿನ ಮಾತುಗಳು ಬೇಡ. ಇನ್ನು ಮುಂದೆ ಅವರಿಗೆ ಹೆಣ ಹೊರುವುದು ಖಾಯಂ ಕೆಲಸವಾಗಲಿದೆ. ಮುಂದೊಂದು ದಿನ ಅವರು ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.


ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ಸಿನಲ್ಲಿ ನನ್ನ ಬಿಟ್ಟರೆ ಗತಿ ಯಾರೂ ಇಲ್ಲ ಅಂತ ದಿಮಾಕು. ಕಾಂಗ್ರೆಸ್ಸಿನಲ್ಲಿ ಪಲ್ಲಕ್ಕಿ ಹೊರುವುದಕ್ಕೂ ನಾನೇ, ಹೆಣ ಹೊರುವುದಕ್ಕೂ ನಾನೇ ಅಂತ ಬೀಗುತ್ತಾರೆ. ಆದ್ರೆ ಅವರ ಅಹಂಕಾರ, ದಿಮಾಕು, ಸೊಕ್ಕು ಬಹಳ ದಿನ ಇರಲ್ಲ. ಬಳ್ಳಾರಿಯ ಜನ ಸ್ವಾಭಿಮಾನಿಗಳಾಗಿದ್ದು ಒಂದು ಸಲ ಜನರು ಕಲಿಸಿದರೆ ಮತ್ತೆ ಕನಕಪುರದಿಂದ ಬಳ್ಳಾರಿಗೆ ಡಿಕೆಶಿ ವಾಪಸ್ ಬರಲ್ಲವೆಂದು ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದಿರಾ ಗಾಂಧಿ ಬಡತನ ನಿರ್ಮೂಲನೆ ಘೋಷಿಸಿ ಬಡತನ ಹೆಚ್ಚಿಸಿದರು: ಜೇಟ್ಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 2019 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ...

news

ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಪ್ರಜ್ವಲ್ ಹೇಳಿದ್ದೇನು?

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭೇಟಿ ಮಾಡಿದ್ದಾರೆ.

news

ಎಐಸಿಸಿ ಸ್ಟಾರ್ ಕ್ಯಾಂಪೇನರ್ ಪಟ್ಟಿ ರಿಲೀಸ್

ಲೋಕಸಭೆ ಎಲೆಕ್ಷನ್ ಮೆಗಾವೋಲ್ಟೇಜ್ ಕಾವು ಪಡೆದುಕೊಳ್ಳುತ್ತಿರುವಂತೆ ಎಐಸಿಸಿ ಸ್ಟಾರ್ ಕ್ಯಾಂಪೇನರ್ ಪಟ್ಟಿ ...

news

ರಾಜೀವ್ ಚಂದ್ರಶೇಖರ್ ಗೆ ಮಹಿಳೆಯರು ಅಟ್ಟಿಸಿಕೊಂಡು ಹೋಗಿದ್ಯಾಕೆ?

ಚುನಾವಣೆ ರಣಕಣ ಕಾವೇರಿರುವಂತೆ ಅಭ್ಯರ್ಥಿಗಳ ಹಾಗೂ ಕಾರ್ಯಕರ್ತರ ಸಿಟ್ಟು ಅಲ್ಲಲ್ಲಿ ಸ್ಪೋಟಗೊಳ್ಳುತ್ತಲೇ ...