ಬೆಂಗಳೂರು: ಐಟಿ ದಾಳಿ ವೇಳೆ ದಾಖಲೆ ಹರಿದು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ಇಂದು ಕೋರ್ಟ್ ಗೆ ಹಾಜರಾಗುವ ಸಾಧ್ಯತೆಯಿದೆ.ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ದಾಳಿ ನಡೆದಾಗ ಡಿಕೆಶಿ ಕೋಟ್ಯಂತ ನಗದು ಹಣ ವ್ಯವಹಾರದ ದಾಖಲೆ ಪತ್ರಗಳನ್ನು ಹರಿದು ಹಾಕಿದ್ದರು ಎಂದು ಅವರ ಮೇಲೆ ಐಟಿ ಅಧಿಕಾರಿಗಳು ದೂರು ದಾಖಲಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಇಂದು ವಿಚಾರಣೆಗಾಗಿ ಕೋರ್ಟ್ ಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.