Widgets Magazine

ಡಿಕೆ ಶಿವಕುಮಾರ್ ಪರ ಅನರ್ಹ ಶಾಸಕ ಬ್ಯಾಟಿಂಗ್

ಮಂಡ್ಯ| Jagadeesh| Last Modified ಬುಧವಾರ, 4 ಸೆಪ್ಟಂಬರ್ 2019 (19:24 IST)
ಇಡಿಯಿಂದ ಬಂಧನಕ್ಕೆ ಒಳಗಾಗಿರೋ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಪರವಾಗಿ ಅನರ್ಹ ಶಾಸಕರೊಬ್ಬರು ಬ್ಯಾಟಿಂಗ್ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಇಡಿ ಕುಣಿಕೆಯಿಂದ ಹೊರ ಬರ್ತಾರೆ. ಅವರ ಮೇಲಿರುವ ಆರೋಪಗಳಿಂದ ಮುಕ್ತರಾಗಿ ಸಧ್ಯವೇ ಹೊರ ಬರ್ತಾರೆ. ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯ ಸ್ನೇಹಿತರು. ಹೀಗಂತ ಅನರ್ಹ ಶಾಸಕರೊಬ್ಬರು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಶುಭವಾಗಲಿ ಎಂದು ದಯಾಮಯನಾದ ಭಗವಂತನನ್ನು ಪ್ರಾರ್ಥಿಸುತ್ತೇನೆ. ಹೀಗಂತ
ಡಾ.ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿ ಶುಭ ಹಾರೈಸಿದ್ದು, ಎಲ್ಲವೂ ಒಳ್ಳೇದಾಗ್ತದೆ. ಶಿವಕುಮಾರ್ ಹವಾಲಾ ಹಣ ಪ್ರಕರಣದಿಂದ ಮುಕ್ತರಾಗ್ತಾರೆ ಎಂದು ಹೇಳಿದ್ದಾರೆ.


 
ಇದರಲ್ಲಿ ಇನ್ನಷ್ಟು ಓದಿ :