ಮಾಜಿ ಸಚಿವ ಹಾಗೂ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ ಅವರ ಬಂಧನದ ಸುತ್ತ ಬಿಜೆಪಿಗೆ ನಂಟಿದೆಯಾ ಅನ್ನೋ ಸುದ್ದಿಗಳು ಹರಿದಾಡುತ್ತಿವೆ.ಡಿಕೆಶಿ ಬಂಧನಕ್ಕೂ ಬಿಜೆಪಿ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ವಿನಾಕಾರಣ ಬಿಜೆಪಿಯನ್ನು ದೂರುವುದರ ಮೂಲಕ ಇಟಾಲಿಯನ್ ಬುದ್ಧಿ ತೋರಿಸುತ್ತಿದೆ ಅಂತ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಟೀಕೆ ಮಾಡಿದ್ದಾರೆ.ಇಂದಿನ ಕಾಂಗ್ರೆಸ್ ಪಕ್ಷ ಇಟಾಲಿಯನ್ ಬುದ್ಧಿ ತೋರಿಸುವುದರ ಮೂಲಕ ಇಸ್ಟ್ ಇಂಡಿಯಾ ಕಂಪನಿಯ ಧೋರಣೆಯನ್ನು ತೋರುತ್ತಿದೆ