ಬೆಂಗಳೂರು : ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಚರ್ಚೆ ನಡೆಸಲು ಗುರುವಾರ ದೆಹಲಿಗೆ ಹೋಗ್ತಿದ್ದೇನೆ ಅಂತಾ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ವಕೀಲರ ಭೇಟಿಗೆ ಹೋಗುತ್ತಿದ್ದೇನೆ. ಇಲಾಖೆ ಅಧಿಕಾರಿಗಳನ್ನು ಅಧಿಕೃತವಾಗಿ ಭೇಟಿ ಮಾಡಲಿದ್ದೇನೆ. ಅವರು 24ಟಿಎಂಸಿ ನೀರು ಕೇಳಿದ್ರು. ನಾವು 3 ಸಾವಿರ ಕ್ಯೂಸೆಕ್ ನೀರು ಬಿಡೋದಾಗಿ ಹೇಳಿದ್ವಿ. 5 ಸಾವಿರ ಕ್ಯೂಸೆಕ್ ಬಿಡುವಂತೆ ಹೇಳಿದ್ದಾರೆ. ನಾಳೆ ವಾಸ್ತವಾಂಶ ಬಗ್ಗೆ ಚರ್ಚೆ