ಗೃಹ ಸಚಿವರು ಹಾಗೂ ಸಿಎಂ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. ಮಾಡೋದೆಲ್ಲ ಮಾಡಿ ಸಂಜೆ ಅಪಾಲಜಿ ಕೊಡೋದು ಸರಿಯಲ್ಲ. ಮೊದಲು ಕಾಂಗ್ರೆಸ್ನವರು ರೇಪ್ ಮಾಡಿದ್ರು ಅಂದ್ರು. 7 ಗಂಟೆ ಮೇಲೆ ಹೆಣ್ಣುಮಕ್ಕಳು ಹೇಗೆ ಓಡಾಡ್ತಾರೆ ಅಂದ್ರು. ಇಂತಹ ಹೇಳಿಕೆಗಳನ್ನ ಪದೇ ಪದೇ ಕೊಡ್ತಾರೆ. ಜನರನ್ನ ಪ್ರಚೋದಿಸುವ ಕೆಲಸ ಮಾಡ್ತಿದ್ದಾರೆ. ಪೊಲೀಸರು ಗೃಹ ಸಚಿವರ ಮೇಲೆ ಕ್ರಮ ಜರುಗಿಸಬೇಕು. ಹೋಂ ಮಿನಿಸ್ಟರ್ ಈ ರೀತಿ ಹೇಳಿದ್ರೆ ಹೇಗೆ? ಇನ್ನು ತನಿಖೆ ಮಾಡೋ ಪೊಲೀಸರ ಕಥೆಯೇನು? ಇಂತವರನ್ನ ಯಾಕೆ ಸಂಪುಟದಲ್ಲಿ ಇಟ್ಟುಕೊಳ್ತೀರ ಎಂದು ಸಿಎಂ ಬೊಮ್ಮಾಯಿಗೆ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.