ಡಿಕೆಶಿ ಕಾಂಗ್ರೆಸ್​ ಸಚಿವರಿಗಾಗಿ ಏರ್ಪಡಿಸಿದ ಉಪಹಾರ ಕೂಟದಲ್ಲಿ ಸಿದ್ದರಾಮಯ್ಯನವರಿಗಿಲ್ಲವಂತೆ ಆಹ್ವಾನ!

ಬೆಂಗಳೂರು| pavithra| Last Modified ಗುರುವಾರ, 4 ಅಕ್ಟೋಬರ್ 2018 (11:55 IST)
ಬೆಂಗಳೂರು : ವೈದ್ಯಕೀಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರು ಕಾಂಗ್ರೆಸ್​ ಸಚಿವರಿಗಾಗಿ ಕೂಟವನ್ನು ತಮ್ಮ ಸರ್ಕಾರಿ ನಿವಾಸದಲ್ಲಿ ಆಯೋಜನೆ ಮಾಡಿದ್ದಾರೆ.


ಉಪಹಾರ ಕೂಟಕ್ಕೆ 16 ಮಂದಿಗಷ್ಟೆ ಆಹ್ವಾನ ನೀಡಿದ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿಲ್ಲ, ಎನ್ನುವುದು ಇದೀಗ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಆದರೆ ಜಾರಕಿಹೊಳಿ ಅವರನ್ನು ಉಪಹಾರ ಕೂಟಕ್ಕೆ ಡಿಕೆಶಿ ಖುದ್ದು ಕರೆ ಮಾಡಿ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಈ ನಡುವೆ ಮುಂಬೈನ ನಿಗದಿತ ಕಾರ್ಯಕ್ರಮದಿಂದ ಬರಲಾಗುತ್ತಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಡಿಕೆಶಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.


ಇನ್ನು ಡಿಕೆಶಿಯವರ ಉಪಹಾರ ಕೂಟಕ್ಕೆ ಡಾ.ಜಿ. ಪರಮೇಶ್ವರ್, ಪ್ರಿಯಾಂಕ್​ ಖರ್ಗೆ, ಪುಟ್ಟರಂಗಶೆಟ್ಟಿ, ಜಮೀರ್, ಆರ್.ವಿ.ದೇಶಪಾಂಡೆ, ಯು.ಟಿ ಖಾದರ್, ವೆಂಕಟರಮಣಪ್ಪ, ಕೃಷ್ಣಬೈರೇಗೌಡ, ಶಿವಾನಂದ ಪಾಟೀಲ್, ಶಂಕರ್, ಶಿವಶಂಕರರೆಡ್ಡಿ, ಜಯಮಲಾ, ಕೆ.ಜೆ ಜಾರ್ಜ್, ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗಮಿಸಿದ್ದು, ಮುಳಬಾಗಿಲು ದೊಸೆ, ಇಡ್ಲಿ-ವಡೆ ಹಾಗೂ ಕಾರಬಾತ್ ವಿಶೇಷ ತಿಂಡಿಯನ್ನು ತರಿಸಲಾಗಿತ್ತು ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :