ಗೌರಿ-ಗಣೇಶ ಹಬ್ಬದಂದು ವಿಚಾರಣೆಗೆ ಹಾಜರಾಗಲಿರುವ ಡಿಕೆಶಿ

ಬೆಂಗಳೂರು| pavithra| Last Modified ಭಾನುವಾರ, 1 ಸೆಪ್ಟಂಬರ್ 2019 (11:25 IST)
ಬೆಂಗಳೂರು : ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾಗಿದ್ದು, ಜಾರಿ ನಿರ್ದೇಶನಲಾಯದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಲೇ ಇದ್ದಾರೆ.
ಇಂದು ಭಾನುವಾರವಾದ್ದರಿಂದ ವಿಚಾರಣೆಯಿಂದ ಕೊಂಚ ರಿಲೀಫ್ ಪಡೆದ ಡಿಕೆ ಶಿವಕುಮಾರ್ ಅವರಿಗೆ ನಾಳೆ ಅಂದರೆ ಸೋಮವಾರ ಗೌರಿ-ಗಣೇಶ ಹಬ್ಬವಿದ್ದರೂ ಕೂಡ ವಿಚಾರಣೆಗೆ ಹಾಜರಾಗಬೇಕಿದೆ ಎನ್ನಲಾಗಿದೆ.


ಸೋಮವಾರ ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ಡಿಕೆಶಿ ವಿಚಾರಣೆಗೆ ವಿನಾಯಿತಿ ಕೋರಿದ್ದಾರೆ ಎನ್ನಲಾಗಿದ್ದು, ಆದರೆ ಇದಕ್ಕೆ ಒಪ್ಪದ ಇಡಿ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :