ಮಳೆಗಾಲ ಆರಂಭದ ಹೊತ್ತಿನಲ್ಲಿಯೇ ಇದೇ ಮೊದಲ ಬಾರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ಮಳೆಹಾನಿಗೆ ತುತ್ತಾಗುವ ಮಹಾದೇವಪುರ ವಲಯ ವ್ಯಾಪ್ತಿ ಪ್ರದೇಶಗಳಿಗೆ ಬಿಬಿಎಂಪಿ, ಜಲಮಂಡಳಿ, ನಮ್ಮ ಮೆಟ್ರೊ ಹಿರಿಯ ಅಧಿಕಾರಿಗಳ ಜೊತೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಬಿಎಂಟಿಸಿ ಎಸಿ ಬಸ್ ನಲ್ಲಿ ಯಮಲೂರು ಕೆರೆ, ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆ, ಹೂಳೆತ್ತುವ ಜಾಗ, ಒಳಚರಂಡಿ, ಕಾಮಗಾರಿ ಜಾಗಕ್ಕೆ ಭೇಟಿ ಕೊಟ್ಟು