ಸಚಿವ ಡಿ.ಕೆ.ಶಿವಕುಮಾರ್ ಈ ದೇಶಕಂಡ ಅತೀ ಹೆಚ್ಚು ಭ್ರಷ್ಟರಲ್ಲಿ ಉನ್ನತ ಸ್ಥಾನ ಹೊಂದಿದ್ದಾರೆ. ಹೀಗಂತ ಆರೋಪ ಕೇಳಿಬಂದಿದೆ.ಗಣಿ ಭಾದಿತ ಜನರ ಮೂಲ ಸೌಕರ್ಯ, ಶಿಕ್ಷಣ, ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 15 ಸಾವಿರ ಕೋಟಿ ಹಣವನ್ನು ಲೂಟಿ ಮಾಡಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಹೊಣೆ ಹೊತ್ತ ಡಿ.ಕೆ.ಶಿವಕುಮಾರ್ ರವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಅರ್.ಹಿರೇಮಠ, ದೇಶಕಂಡ ಅತೀ