ಪ್ರತಿಷ್ಠೆಗಾಗಿ ಪಕ್ಷಕ್ಕೆ ಹಾನಿ ಮಾಡುವವರನ್ನು ಸಹಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎಚ್ಚರಿಸಿದ್ದಾರೆ.ಕಾಂಗ್ರೆಸ್ ಸರಣಿ ಸಭೆಯಲ್ಲಿ ಬೆಳಗಾವಿ ಹಾಗೂ ಗುಲ್ಬರ್ಗ ಕಂದಾಯ ವಿಭಾಗಗಳ ಜಿಲ್ಲೆಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ವಿವಿಧ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ಪ್ರತಿಷ್ಠೆಗಳಿಗೆ ಅಂಟಿಕೊಳ್ಳದೆ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.ಪಕ್ಷವನ್ನು ಅಧಿಕಾರಕ್ಕೆ ತರುವುದು ಮೊದಲ ಆದ್ಯತೆಯಾಗಿದ್ದು ಪಕ್ಷ ಅಧಿಕಾರ ಹಿಡಿಯಲು ಯಾವುದೇ ಒಳ ಜಗಳಗಳು, ಒಣ ಪ್ರತಿಷ್ಠೆಗಳು ಕಾರಣವಾಗಬಾರದು. ಇದರಿಂದ ಪಕ್ಷಕ್ಕೆ