ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ವಿಧೇಯಕ ಜಾರಿಗೆ ತರಬೇಡಿ ಎಂದು ಡಾ.ಯತೀಂದ್ರ ತಂದೆ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಯತೀಂದ್ರ, ವಿಧೇಯಕ ಜಾರಿಗೆ ತರುವುದರಿಂದ ಖಾಸಗಿ ವೈದ್ಯರು ಭಯದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ಹಿಂಜರಿಯುತ್ತಾರೆ ಎಂದು ತಿಳಿಸಿದ್ದಾರೆ. ಕೆಪಿಎಂಇ ಮಸೂದೆ ಖಾಸಗಿ ವೈದ್ಯರಿಗೆ ಕರಾಳಶಾಸನವಾಗಲಿದೆ. ಇಂತಹ ವಿಧೇಯಕ ಜಾರಿಗೆ ತರುವುದರಿಂದ ವೈದ್ಯರು ನಿರ್ಭಯರಾಗಿ ಸೇವೆ ಸಲ್ಲಿಸಲು