ಬೆಂಗಳೂರು-ಪೊಲಿಟಿಕಲ್ ಲೀಡರ್ಸ್….!ಒನ್ಸ್ ಅಪ್ ಆನ್ ಏ ಟೈಮ್ ಇವರ ಡ್ರಸ್ ಕೋಡ್ ಹೇಗಿತ್ತು. ಈಗ ಹೇಗಾಗಿದೆ. ಅದರಲ್ಲೂ ಈಗ ಇವರು ತೊಡುವ ದಿರಿಸುಗಳನ್ನ ನೋಡ್ತಾ ಇದ್ರೆ, ಇದೆಲ್ಲ ಸಾಮಾನ್ಯವೇ ಬಿಡಿ ಅನ್ನೋ ಆಗೇ ಆಗೋಗಿದೆ. ಇವತ್ತು ರಾಜಕೀಯ ನೇತಾರರ ನಡಾವಳಿಗಳು ಬದಲಾಗ್ತಿವೆ. ಆಡಳಿತದ ವೈಖರಿಗಳು ಬೇರೆಯದ್ದೇ ರೂಪವನ್ನು ಪಡೆದುಕೊಳ್ತಾ ಇವೆ. ರಾಜಕಾರಣ ಅನ್ನೋದು ಇವತ್ತು ಬೇರೆ ಆಯಾಮವನ್ನು ಪಡೆದುಕೊಂಡು ಬಿಟ್ಟಿದೆ. ಅದರಲ್ಲೂ ಜನಪ್ರತಿನಿದಿಗಳು ಅಂತ ಕರೆಸಿಕೊಳ್ಳುವವರ ರೀತಿ ರಿವಾಜುಗಳು ಮೊದಲಿನಂತೆ ಕಾಣ್ತಿಲ್ಲ. ಎಲ್ಲವೂ ಬದಲಾಗಿದೆ. ಬದಲಾಗ್ತಿದೆ.