ರಾಜ್ಯ ರಾಜಕೀಯದ ಹೊಯ್ದಾಟದಲ್ಲಿ ಮೈತ್ರಿ ಸರಕಾರ ಬಿಜೆಪಿಯ ಹೊಡೆತಕ್ಕೆ ಮೆತ್ತಗಾದಂತಿದ್ದು, ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ವಿಧಾನಸಭೆಯಲ್ಲಿ ಇಂದು ಉಂಟಾದ ಬೆಳವಣಿಗೆಗಳು ಹಾಗೂ ಕಾಂಗ್ರೆಸ್ ನ 9 ಶಾಸಕರ ಗೈರು ಹಾಜರಿ ಹಿನ್ನೆಲೆಯಲ್ಲಿ ಹಣಕಾಸು ಖಾತೆ ಹೊಂದಿರು ವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ, ಬಜೆಟ್ ಮಂಡಿಸುತ್ತಾರೆಯೇ ಎನ್ನುವ ಕುತೂಹಲ ಉಳಿದುಕೊಂಡಿದೆ. ಬಜೆಟ್ ಮಂಡನೆಗೆ ಭಾರೀ ಉತ್ಸುಕತೆ ತೋರಿದ್ದ ಮುಖ್ಯಮಂತ್ರಿಗೆ ರಾಜಕೀಯ ಬೆಳವಣಿಗೆಗಳು ತಲೆನೋವು