ಮೊಬೈಲ್ ಟವರ್ ಏರಿ ಪ್ರತಿಭಟನೆ ಮಾಡಿದ್ಯಾಕೆ?

ಚಿಕ್ಕಬಳ್ಳಾಪುರ, ಮಂಗಳವಾರ, 30 ಏಪ್ರಿಲ್ 2019 (17:50 IST)

ಮೊಬೈಲ್‌ ಟವರ್ ಏರಿ  ದಲಿತರು ಪ್ರತಿಭಟನೆ ನಡೆಸಿದ್ದಾರೆ.

ಭಕ್ತರಹಳ್ಳಿ ಗ್ರಾಮಸ್ಥರು ಮೊಬೈಲ್ ಟವರ್ ಏರಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಸಂಭಂದಿ‌ ಬೈರಾರೆಡ್ಡಿಯಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಅಲ್ಲಿನ ಜನರು ದೂರಿದ್ದಾರೆ.  
ದಲಿತ ಕಾಲೋನಿಯಲ್ಲಿ ಮೊಬೈಲ್‌ ಟವರ್ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿದ್ದಾರೆ ಬೈರಾರೆಡ್ಡಿ ಎನ್ನಲಾಗುತ್ತಿದೆ. ಟವರ್ ನಿಂದ ಗ್ರಾಮಸ್ಥರಿಗೆ‌ ನಿತ್ಯ ಕಿರುಕುಳ ಉಂಟಾಗುತ್ತಿದೆ. ದಲಿತ ಕಾಲೋನಿಯ ಮದ್ಯದಲ್ಲಿ ದೌರ್ಜನ್ಯದಿಂದ‌ ಟವರ್ ನಿರ್ಮಾಣ ಮಾಡಲಾಗಿದೆ ಎಂದು ಜನರು ಆರೋಪ ಮಾಡಿದ್ದಾರೆ.

ಟವರ್ ಗೆ ಅಳವಡಿಸಿರುವ  ಜನರೇಟ್ ಶಬ್ದದಿಂದ ವಿದ್ಯಾರ್ಥಿಗಳಿಗೆ ಓದಲು‌ ತೊಂದರೆ ಆಗುತ್ತಿದೆ. ಹೈ ವೋಲ್ಟೇಜ್  ವಿದ್ಯುತ್ ಶಾಕ್ ನಿಂದ‌ ಅಕ್ಕಪಕ್ಕದ ಕುಟುಂಬಗಳಿಗೆ  ಪ್ರಾಣಭಯ ಎದುರಾಗಿದೆ. ಟವರ್ ಸ್ಥಳಾಂತರಗೊಳಿಸುವಂತೆ ಪ್ರತಿಭಟನೆ ನಡೆಸಿದ್ರು.  

 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕನ್ನಡದ ಕಗ್ಗೊಲೆ ಮಾಡಿದ ವಿಶ್ವವಿದ್ಯಾಲಯ?

ವಿಶ್ವವಿದ್ಯಾಲಯವೊಂದರ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡದ ಕಗ್ಗೊಲೆ ಮಾಡಿರುವ ಆರೋಪ ಕೇಳಿಬಂದಿದೆ.

news

ಮಳೆಗೆ ಅಡಿಕೆ, ತೆಂಗು, ಭತ್ತ ಭಾರೀ ಹಾನಿ

ಅಕಾಲಿಕವಾಗಿ ಸುರಿದ ಮಳೆಗೆ ಭಾರೀ ಪ್ರಮಾಣದ ಬೆಳೆ ಹಾಳಾದ ಘಟನೆ ನಡೆದಿದೆ.

ಕುಡಿತದ ಮತ್ತಿನಲ್ಲಿ ಹಾವು ಹಿಡಿಯೋಕೆ ಹೋಗಿ ಕಚ್ಚಿಸಿಕೊಂಡ: ಶಾಕಿಂಗ್

ಕುಡಿತದ ಮತ್ತಿನಲ್ಲಿ ಹಾವು ಹಿಡಿಯಲು ಹೋದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಘಟನೆ ನಡೆದಿದೆ.

news

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಹಾಸನ ಜಿಲ್ಲೆಗೆ ಅಗ್ರ ಸ್ಥಾನ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ಶೇ.73.2 ರಷ್ಟು ವಿದ್ಯಾರ್ಥಿಗಳು ...