ಇದು ಸೋಶಿಯಲ್ ಮೀಡಿಯಾ ಕಾಲ.. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಒಂದು ವಿಡಿಯೋ ಚುನಾವಣೆಯ ದಿಕ್ಕನ್ನೇ ಬದಲಿಸಬಹುದು ಅನ್ನೋದು ಸಾಬೀತಾಗಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದ್ದ ಡಾ.ಕೆ.ಸುಧಾಕರ್ ಮತ್ತೊಮ್ಮೆ ಗೆಲುವು ಸಾಧಿಸಿದ್ದು, ಆ ಗೆಲುವಿಗೆ ಒಂದು ವಿಡಿಯೋ ಕಾರಣ ಎನ್ನಲಾಗುತ್ತಿದೆ. ಡಾ.ಕೆ.ಸುಧಾಕರ್ 2013ರಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರದ ಶಾಸಕರಾಗಿ ಆಯ್ಕೆಯಾಗಿದ್ದರು. ಯುವ ನಾಯಕ ಎನಿಸಿಕೊಂಡಿರೋ ಡಾ.ಕೆ.ಸುಧಾಕರ್, ಜನರ ಸಂಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ, ಕ್ಷೇತ್ರದ ಜನರ ಸುಖ ದುಃಖಗಳಿಗೆ ಸ್ಪಂದಿಸುತ್ತಿದ್ದರು. ಕ್ಷೇತ್ರದ