ಬೆಂಗಳೂರು: ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಬಿಎಸ್ ವೈ ಯಾತ್ರೆ ಆರಂಭಿಸಿದ್ದು, ಕುಣಿಗಲ್ ನಲ್ಲಿ ರಥ ಸಂಚಾರ ಮುಗಿಸಿದೆ. ಆದರೆ ಪರಿವರ್ತನಾ ಯಾತ್ರೆ ರಥದ ಬಗ್ಗೆ ನಿಮಗೆಷ್ಟು ಗೊತ್ತು…? ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಬಳಸುತ್ತಿರುವ ರಥವನ್ನು ಬರೋಬ್ಬರಿ 90 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಿಎಸ್ ವೈ ಆಸ್ತಿಕರೇ. ಹೀಗಾಗಿ ಅವರು ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ಅವರು