ಕೇರಳ, ಕೊಡಗು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಈ ವರ್ಷ ಮಳೆ ತನ್ನ ರೌದ್ರತೆಯನ್ನು ತೋರಿದೆ. ಹೀಗಾಗಿ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ಜನರು, ಜಾನುವಾರುಗಳು ಮಳೆಗೆ ಜೀವ ಕಳೆದುಕೊಳ್ಳುವಂತಾಗಿದೆ.ನಿರಂತರವಾಗಿ ಸುರಿದ ಮಳೆ ಈ ವರ್ಷದಲ್ಲಿ ಜನರ ಜೀವನವನ್ನು ಆರ್ಥಿಕ ಸಂಕಷ್ಟಕ್ಕೆ ಒಂದೆಡೆ ನೂಕಿದೆ. ಇನ್ನೊಂದೆಡೆ ಸಾವಿರಾರು ಕೋಟಿ ರೂ. ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ.ಏತನ್ಮಧ್ಯೆ ದೇಶದಲ್ಲಿ ಇದುವರೆಗೆ 75 ಲಕ್ಷ ಜನರಿಗೆ ನೆರೆ, ಪ್ರವಾಹದ ಬಿಸಿ ಜೋರಾಗಿಯೇ ತಟ್ಟಿದೆ.