ಈ ಆ್ಯಪ್ ನಲ್ಲಿ ನೋಂದಣಿ ಮಾಡಿಕೊಂಡ ಜನರೆಷ್ಟು ಗೊತ್ತಾ?

ಚಿಕ್ಕಬಳ್ಳಾಪುರ| Jagadeesh| Last Modified ಶುಕ್ರವಾರ, 18 ಸೆಪ್ಟಂಬರ್ 2020 (21:45 IST)
ರಾಜ್ಯ ಸರಕಾರದ ಇಲಾಖೆಯೊಂದರ ಆ್ಯಪ್ ನಲ್ಲಿ ದಾಖಲೆ ಪ್ರಮಾಣದಲ್ಲಿ ಜನರು ನೋಂದಣಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ  ಆಪ್ ಮೂಲಕ  ಸಮೀಕ್ಷೆ ಕಾರ್ಯ ಯಶಸ್ವಿಯಾಗಿದ್ದು, ಒಂದು ಕೋಟಿಗೂ ಹೆಚ್ವು ರೈತರು ಬೆಳೆ ಸಮೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಈ ಬಾರಿ ಉತ್ತಮ ಬೆಳೆಯೂ ಆಗುವ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.> > ಬೆಳೆ ಸಮೀಕ್ಷೆ ಆಪ್ ನಲ್ಲಿ ಒಂದು ಕೋಟಿಗೂ ಹೆಚ್ವು ರೈತರು ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿದ್ದಾರೆ.
ರೈತರು ತಾವು ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವರು ಸ್ವತಂತ್ರರು. ಅವರು ಎಪಿಎಂಸಿಗಳಿಗೆ ತಂದು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂದೇನೂ ಇಲ್ಲ.

ಈ ಬಾರಿ ರಾಜ್ಯದಲ್ಲಿ ಉತ್ತಮ‌ ಮಳೆಯಾಗಿರುವುದರಿಂದ ಉತ್ತಮ‌ ಬೆಳೆಯೂ ಆಗುವ ನಿರೀಕ್ಷೆ ಇದೆ ಎಂದಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :