ಹುಲಿ ದಾಳಿಗೆ ಆ ಪ್ರದೇಶದಲ್ಲಿ ಎರಡನೇ ಬಲಿಯಾಗಿದೆ.ಜಮೀನಿಗೆ ತೆರಳುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಶಿವಲಿಂಗಪ್ಪ(55)ಎಂಬುವರೇ ಮೃತ ವ್ಯಕ್ತಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿ ಗ್ರಾಮದ ನಿವಾಸಿ ಶಿವಲಿಂಗಪ್ಪ ಜಮೀನಿಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.ಒಂದು ತಿಂಗಳ ಅವಧಿಯಲ್ಲಿ ನರಭಕ್ಷಕ ಹುಲಿ ಎರಡನೇ ಬಲಿ ಪಡೆದಿದೆ. ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದ ಮೂರುಕಲ್ಲು ಸಮೀಪ ಘಟನೆ ನಡೆದಿದೆ.ಅರಣ್ಯಾಧಿಕಾರಿಗಳ ಬೇಜವಾಬ್ದಾರಿಗೆ