ಕೊರೊನಾದಿಂದ ಬಚಾವ್ ಆಗಲು ರಾಜ್ಯದಲ್ಲಿ ಮೊದಲ ಬಾರಿಗೆ ವಿನೂತನವಾಗಿ ಸ್ಯಾನಿಟೈಜರ್ ಸಿದ್ಧಪಡಿಸಲಾಗಿದೆ. ರೆಕ್ಟಿಫೈಡ್ ಸ್ಪಿರಿಟ್ ನಿಂದ ಈಗ ಸ್ಯಾನಿಟೈಸರ್ ತಯಾರಿಸಲು ನಿರ್ಧಾರಿಸಲಾಗಿದೆ. ಇದು ರಾಜ್ಯದಲ್ಲಿ ಯೇ ಪ್ರಥಮ ಪ್ರಯೋಗ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.ಮಂಡ್ಯದಲ್ಲಿ 3 ಸಕ್ಕರೆ ಕಾರ್ಖಾನೆಗಳು ಇವೆ. ಅದರಲ್ಲಿ ಮದ್ದೂರು ತಾಲ್ಲೂಕು ಕೊಪ್ಪ ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆ ಯವರು 500 ಲೀಟರ್ ರೆಕ್ಟಿಫೈಡ್ ಸ್ಪಿರಿಟ್ ನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಇದರಿಂದ ಸ್ಯಾನಿಟೈಸರ್ ತಯಾರಿಸಬಹುದು.ಈಗ