ಅಲ್ಲಿನ ಎರಡು ಗ್ರಾಮಗಳ ಜನರು ಆನೆಗಳೆಂದರೆ ಸಾಕು, ಈಗ ಗಾಬರಿಗೆ ಒಳಗಾಗುತ್ತಿದ್ದಾರೆ.ಆನೆಗಳು ಬಂದಿವೆ ಎಂಬ ಸುದ್ದಿ ಅವರ ಕಿವಿಗೆ ಬೀಳೋದೆ ತಡ, ಅವರು ಗಾಬರಿಯಾಗುತ್ತಿದ್ದಾರೆ. ಬಾಳೆ ಹಾಗೂ ಅಡಿಕೆ ತೋಟಕ್ಕೆ ಕಾಡಾನೆಗಳು ನುಗ್ಗಿ ದಾಂಧಲೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ ಮಾಡಿರುವ ಘಟನೆ ನಡೆದಿದೆ.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೈರಾಪುರ ಹಾಗೂ ದ್ಯಾಂಪುರದಲ್ಲಿ ಘಟನೆ ನಡೆದಿದೆ. ಎರಡು ಗ್ರಾಮಗಳ ಹತ್ತಾರು ತೋಟಗಳಲ್ಲಿ ಎರಡು ಕಾಡಾನೆಗಳು ದಾಳಿ ನಡೆಸಿದ್ದು