ಕುಡಿದು ವ್ಯಾನ್ ಚಲಾಯಿಸಿದ ಪೊಲೀಸಪ್ಪ ಮಾಡಿದ ಅಪಘಾತಗಳೆಷ್ಟು ಗೊತ್ತಾ?

ಆನೇಕಲ್| Jagadeesh| Last Modified ಗುರುವಾರ, 26 ಜುಲೈ 2018 (15:17 IST)
ಕುಡಿದು ವಾಹನಗಳನ್ನು ಚಲಾಯಿಸುವ ವ್ಯಕ್ತಿಗಳಿಂದ ಪೊಲೀಸರು ದಂಡ ವಿಧಿಸುತ್ತಾರೆ. ಅದು ಕಾನೂನು. ಆದರೆ ಇಲ್ಲೊಬ್ಬ ಪೊಲೀಸ್ ಕುಡಿದು ವ್ಯಾನ್ ಚಲಾಯಿಸಿದ್ದಾನೆ. ಅಷ್ಟೇ ಅಲ್ಲ ಸರಣಿ ಮಾಡಿದ್ದಾನೆ. ಪೊಲೀಸಪ್ಪನ ಈ ನಡೆಗೆ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ.

ಕೆ.ಎಸ್.ಆರ್.ಪಿ ಪೊಲೀಸಪ್ಪ ಕುಡಿದ ಮತ್ತಿನಲ್ಲಿ ಇಲಾಖೆಯ ವ್ಯಾನ್ ನ್ನು ಅಡ್ಡಾದಿಡ್ಡಿ

ಚಲಾಯಿಸಿದ್ದಾನೆ. ಅಷ್ಟೇ ಅಲ್ಲ ಸರಣಿ ಅಪಘಾತಕ್ಕೆ ಕಾರಣವಾದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸಿಂಗಸಂದ್ರ ಬಳಿ ನಡೆದಿದೆ. ಹೊಸೂರು ಮುಖ್ಯರಸ್ತೆಯ ಸಿಂಗಸಂದ್ರ ಬಳಿ
ಕೆ.ಎಸ್.ಆರ್.ಪಿ 9ನೇ ಪಡೆಯ ಪೊಲೀಸಪ್ಪನೊಬ್ಬ ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿಯಾಗಿ ಇಲಾಖೆಯ ವ್ಯಾನ್ ಚಲಾಯಿಸಿದ ಪರಿಣಾಮ ಸರಣಿ ಅಪಘಾತಗಳಾಗಿವೆ.

ಒಂದು
ಕಾರು ಹಾಗೂ ಬೈಕ್ ಜಖಂಗೊಂಡಿದೆ ಇನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಕುಡುಕ ಪೊಲೀಸಪ್ಪನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ಟ್ರಾಫಿಕ್ ಪೋಲಿಸರು ಆಗಮಿಸಿ ಕುಡುಕ ಪೊಲೀಸಪ್ಪನಿಗೆ ವ್ಯಾನ್' ಸೈಡಿಗೆ ಹಾಕುವಂತೆ ವಿನಂತಿಸಿಕೊಳ್ಳುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :