ಭಾರತ ದೇಶದಲ್ಲಿ ಮಾತ್ರ ಪ್ರಾಣಿಗಳನ್ನು ಗೌರವಿಸುವ, ಸತ್ಕರಿಸುವ ಹಾಗೂ ವಿಶೇಷ ಹಬ್ಬಗಳನ್ನು ಆಚರಿಸುವ ವಿಶೇಷ ಸಂಸ್ಕøತಿ ಮತ್ತು ಪರಂಪರೆಯಿದೆ. ಕೃಷಿ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿರುವ ಎತ್ತುಗಳು ಕೃಷಿ ಚಟುವಟಿಕೆಯಲ್ಲಿ ಹಗಲಿರುಳು ಶ್ರಮಿಸುತ್ತವೆ. ಈ ಎತ್ತುಗಳಿಗೆ ಕೃತಜ್ಞತಾ ಭಾವ ವ್ಯಕ್ತಪಡಿಸಲೆಂದೇ ರೈತರು ಕಾರಹುಣ್ಣಿಮೆ ಹಾಗೂ ಹೋಳಾ ಹಬ್ಬಗಳನ್ನು ಆಚರಿಸುವ ಮೂಲಕ ಎತ್ತುಗಳ ಬಗ್ಗೆ ವಿಶೇಷ ಕಾಳಜಿ, ಪೂಜನೀಯ ಮತ್ತು ಗೌರವಪೂರ್ವಕ ಭಾವನೆ ತೋರುವರು.ಮಹಾರಾಷ್ಟ್ರ ರಾಜ್ಯದಲ್ಲಿ ಪೋಳಾ ಹಬ್ಬಕ್ಕೆ ಬೈಲ ಪೋಳಾ ವೃಷಭ