ಭಾರತದಲ್ಲಿ ಜನಸಂಖ್ಯೆ ನಿಯಂತ್ರಿಸಲು ಕೇಂದ್ರ ಸಚಿವರು ನೀಡಿದ ಪರಿಹಾರವೇನು ಗೊತ್ತಾ?

ನವದೆಹಲಿ, ಶುಕ್ರವಾರ, 12 ಜುಲೈ 2019 (11:02 IST)

ನವದೆಹಲಿ : ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪರಿಹಾರವೊಂದನ್ನು ಸೂಚಿಸಿದ್ದಾರೆ.
ಸಂಸತ್ ನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಗಿರಿರಾಜ್ ಸಿಂಗ್, ‘ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅದನ್ನು ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನದ ಹಕ್ಕು ನೀಡಬಾರದು. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೆರುವಂತಿಲ್ಲ ಎಂಬ ಕಾನೂನು ತರಬೇಕು’ ಎಂದು ಸಲಹೆ ನೀಡಿದ್ದಾರೆ.


ಸಚಿವರ ಈ ಹೇಳಿಕೆಗೆ ಬಾರೀ ವಿರೋಧ ವ್ಯಕ್ತವಾಗಿದ್ದು, ಈಗಲೇ ಚುನಾವಣೆಯಲ್ಲಿ ಮತದಾನ ಮಾಡುವವರ ಪ್ರಮಾಣ ಕಡಿಮೆಯಾಗಿದೆ. ಇನ್ನು, ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಮತ ಚಲಾಯಿಸುವಂತಿಲ್ಲ ಎಂಬ ಕಾನೂನು ತಂದರೆ ಮತದಾನದ ಪ್ರಮಾಣ ಇನ್ನೂ ಕಡಿಮೆಯಾಗಲಿದೆ ಎಂದು ಹಲವರು  ಟೀಕಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು ಅಧಿವೇಶನಕ್ಕೆ ಹಾಜರಾಗಲಿದ್ದಾರಂತೆ ರೋಷನ್ ಬೇಗ್

ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೋಷನ್ ಬೇಗ್ ಅವರು ಇಂದು ನಡೆಯುವ ಅಧಿವೇಶನಕ್ಕೆ ...

news

ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು- ಶಾಸಕ ರೇಣುಕಾಚಾರ್ಯ

ಬೆಂಗಳೂರು : ಸಚಿವ ಸಾರಾ ಮಹೇಶ್ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ವಿಚಾರ ಇದು ಆಕಸ್ಮಿಕ ಭೇಟಿ ಎಂದು ...

news

ಜೆಡಿಎಸ್ ಜೊತೆ ಸರ್ಕಾರ ನಡೆಸೋಕೆ ಸಾಧ್ಯವೇ ಇಲ್ಲ- ಬಿ.ಎಸ್ ಯಡಿಯೂರಪ್ಪ

ಬೆಂಗಳೂರು : ಸಚಿವ ಸಾರಾ ಮಹೇಶ್ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್, ...

news

ದೇವರ ಆಶೀರ್ವಾದ ಇರುವವರೆಗೆ ಕುಮಾರಸ್ವಾಮಿ ಸಿಎಂ ಆಗಿರ್ತಾರಂತೆ

ಮೈಸೂರು : ಮೈತ್ರಿ ಸರ್ಕಾರ ಗಂಡಾಂತರದಲ್ಲಿರುವ ಹಿನ್ನಲೆಯಲ್ಲಿ ಈಗಾಗಲೇ ಟೆಂಪಲ್ ರನ್ ಮಾಡುತ್ತಿರುವ ಸಚಿವ ...