ಶ್ರೀಲಂಕಾ : ಶ್ರೀಲಂಕಾದವರು ದೇವರೆಂದು ಪೂಜಿಸುವ ರಾವಣನನ್ನು ಇದೀಗ ಅಲ್ಲಿನ ಸರ್ಕಾರ ವಿಶ್ವದ ಮೊದಲ ವಿಮಾನ ಚಾಲಕ ಎಂದು ಘೋಷಣೆ ಮಾಡಿ, ಈ ಬಗ್ಗೆ ಸಂಶೋಧನೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ಶ್ರೀಲಂಕಾದ ಅತಿ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಕಟುನಾಯಕೆಯಲ್ಲಿ ಸಮ್ಮೇಳನವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಭಾಗವಹಿಸಿದ್ದರು. ಈ ವೇಳೆ ಶ್ರೀಲಂಕಾ ನಾಗರಿಕ ವಿಮಾನಯಾನ ಸಂಸ್ಥೆ ಉಪಮುಖ್ಯಸ್ಥ ಶಶಿ ದಾನತುಂಗೆ, ರಾವಣ ಪ್ರತಿಭಾನ್ವಿತ