ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ.ತಂಗಿಯನ್ನ ಚುಡಾಯಿಸಿದ ಕಾರಣಕ್ಕಾಗಿ ಯುವಕನಿಗೆ ಯುವತಿಯ ಅಣ್ಣಂದಿರಿಬ್ಬರು ಚಾಕುವಿನಿಂದ ಮನಬಂದಂತೆ ಇರಿದಿದ್ದಾರೆ.ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಚಂದ್ರಶೇಖರ್ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿವೆ. ಇರಿತಕ್ಕೊಳಗಾದ ಚಂದ್ರಶೇಖರ್ ಅದೇ ನಗರದ ಕಿರಣ್ ಹಾಗೂ ಅಭಿ ಎನ್ನುವವರ ತಂಗಿಯನ್ನು ಚುಡಾಯಿಸಿದ್ದಾನೆ. ಈ ವಿಚಾರವಾಗಿ ಇಬ್ಬರು ಅಣ್ಣಂದಿರೂ ಚಂದ್ರಶೇಖರ್ಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ.ಎಷ್ಟು ಹೇಳಿದರೂ ಕೇಳದೇ