ವಿಧಾನ ಪರಿಷತ್ ಮಾಜಿ ಸದಸ್ಯರೊಬ್ಬರ ಮನೆಯಲ್ಲಿ ಏಕಾಏಕಿಯಾಗಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಲಿನ ಜನರು ಕೆಲಕಾಲ ಭೀತಿಗೊಳಗಾಗಿದ್ದರು.ಕಲಬುರಗಿಯಲ್ಲಿರುವ ಕಾಂಗ್ರೆಸ್ ನ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ರ ನಿವಾಸದಲ್ಲಿ ಫ್ರೀಡ್ಜ್ ಸ್ಫೋಟಗೊಂಡಿದೆ. ಕಲಬುರ್ಗಿಯ ಶಾಂತಿನಗರದಲ್ಲಿರುವ ನಿವಾಸದಲ್ಲಿ ಘಟನೆ ಸಂಭವಿಸಿದೆ.ಫ್ರೀಡ್ಜ್ ಬ್ಲಾಸ್ಟ್ನಿಂದಾಗಿ ಬೆಡ್ರೂಂಗೂ ಬೆಂಕಿ ಆವರಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್ ಶಾಟ್೯ ಸಕ್ಯೂಟ್ನಿಂದ ಫ್ರೀಡ್ಜ್ ಬ್ಲಾಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ