ಕಲಬುರ್ಗಿ ಪ್ರಾದೇಶಿಕ ಆಯುಕ್ತ, ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(HKRDB) ಕಾರ್ಯದರ್ಶಿ ಸುಬೋದ್ ಯಾದವ್ ಅವರು ಕಚೇರಿಯಲ್ಲಿನ ಘಟನೆ ಬಗ್ಗೆ ಟ್ವಿಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಅಕ್ಟೋಬರ್ 15 ರಂದು ರಾತ್ರಿ 9.23ಕ್ಕೆ ಟ್ವೀಟ್ ಮಾಡಿರೋ ಸುಬೋದ್ ಯಾದವ್, ಇಂದು ಕಚೇರಿಯಲ್ಲಿ ಅತ್ಯಂತ ಕೆಟ್ಟ ದಿನ ಎದುರಿಸಿದೆ. ಕೆಲವು ಸಲ ನೀವು ಏನೇ ಮಾಡಿದರೂ ಅದು ಗಣನೆಗೆ ಬರೋದಿಲ್ಲ. ಕೆಲವು ಅನಗತ್ಯ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತೆ.