ಜ್ವಾಲಾಮುಖಿ ಅಂದರೆ ಉರಿ ಬೆಟ್ಟ, ಕೆಂಡದ ಜ್ವಾಲೆ..ಭೂಮಿಯ ಕೆಳ ಪದರದಲ್ಲೆಲ್ಲೋ ಹರಿಯುತ್ತಲೇ ಇರುತ್ತದೆ. ನದಿಯಂತೆ ,ಪ್ರವಾಹದಂತೆ ಭೂಮಿಯಡಿಯಿರುವ ಈ ಲಾವಾರಸ ಒಮ್ಮೊಮ್ಮೆ ಮೇಲ್ಪದರಕ್ಕೆ ಬಂದು ಉಕ್ಕ ತೊಡಗುತ್ತದೆ. ಆಗ ಭೂಮಿಯ ಮೇಲಿದ್ದ ಸಕಲ ಜೀವರಾಶಿಗಳಿಗೂ ಆಪತ್ತು. ಭೂಗರ್ಭದಿಂದ ಕುದಿಯುವ ದ್ರವ,ಬೂದಿ,ಹೊಗೆ, ಕಲ್ಲು ,ಮಣ್ಣುಗಳೆಲ್ಲ ಒಮ್ಮೆಲೆ ಬಾನೆತ್ತರಕ್ಕೆ ಚಿಮ್ಮತೊಡಗಿದರೆ ಅಲ್ಲಿ ಜ್ವಾಲಾಮುಖಿ ತನ್ನ ಅಟ್ಟಹಾಸ ತೋರಲು ಶುರು ಮಾಡಿ ಬಿಡುತ್ತದೆ. ಇನ್ನೂ ನದಿ ಅಂತಿಲ್ಲ, ಪರ್ವತ ಅಂತಿಲ್ಲ, ಸಾಗರ ಅಂತಿಲ್ಲ,