ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಅಡ್ಡಬಂದ ಕಾರಣಕ್ಕೆ ಯುವಕನಿಗೆ ಎಲ್ಲಾ ಸೇರಿ ಮಾಡಿದ್ದೇನು ಗೊತ್ತಾ?

ಬೆಂಗಳೂರು, ಮಂಗಳವಾರ, 11 ಡಿಸೆಂಬರ್ 2018 (07:40 IST)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಿಗೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗಿದ್ದು, ಇದೀಗ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಅಡ್ಡಬಂದ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಉತ್ತರಹಳ್ಳಿಯ ಅಕ್ಕಮ್ಮ ಬೆಟ್ಟದಲ್ಲಿ ನಡೆದಿದೆ.


ಜಬ್ಬಿ ಖಾನ್ ಹಲ್ಲೆಗೊಳಗಾದ ಯುವಕ ಎಂಬುದಾಗಿ ತಿಳಿದುಬಂದಿದೆ. ಅಕ್ಕಮ್ಮ ಬೆಟ್ಟದಲ್ಲಿ ಪ್ರೇಯಸಿ ಜೊತೆ ಪ್ರಿಯಕರನೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆಕಸ್ಮಿಕವಾಗಿ ಜಬ್ಬಿ ಖಾನ್ ಅಡ್ಡ ಬಂದಿದ್ದಾನೆ. ಇದರಿಂದ ಕೋಪಗೊಂಡ ಪ್ರಿಯಕರ ಅಡ್ಡಬಂದ ಯುವಕನನ್ನು ಮನಬಂದಂತೆ ಥಳಿಸಿದಲ್ಲದೇ ತನ್ನ 6 ಮಂದಿ ಸ್ನೇಹಿತರೊಂದಿಗೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಆ ಯುವಕನ ಬಳಿ ಇದ್ದ ಪರ್ಸ್ ಹಾಗೂ ಮೊಬೈಲ್ ಅನ್ನು ಕಿತ್ತುಕೊಂಡಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಯುವಕ ಜಬ್ಬಿ ಖಾನ್ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂಭೋಗದ ವೇಳೆ ಪತಿಯನ್ನು ಕೊಲೆ ಮಾಡಿದ ಪತ್ನಿ. ಕಾರಣವೇನು ಗೊತ್ತಾ?

ಕೋಲ್ಕತ್ತಾ : ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನಲೆಯಲ್ಲಿ ಪತ್ನಿಯೇ ಪತಿಯನ್ನು ಹತ್ಯೆಗೈದ ಘಟನೆ ...

news

ಡ್ರೆಸ್ ವಿಚಾರಕ್ಕೆ ಜಗಳವಾಡಿದ ಸಹೋದರಿಯರು. ಆಮೇಲೆ ನಡೆದದ್ದೇನು ಗೊತ್ತಾ?

ಒಡಿಶಾ : ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಸಹೋದರಿಯರಲ್ಲೊಬ್ಬಾಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ...

news

ಇಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ

ನವದೆಹಲಿ : ಲೋಕಸಭೆಯ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ...

news

ಕುಖ್ಯಾತ ಅಂತರಾಜ್ಯ ಮನೆ ಕಳ್ಳರ ಬಂಧನ

ಮನೆ ಕಳ್ಳತನ ಮಾಡುವುದರಲ್ಲಿ ಕುಖ್ಯಾತರಾಗಿದ್ದ ತ್ರಿಮೂರ್ತಿಗಳ ಹೆಡೆಮುರಿ ಕಟ್ಟುವಲ್ಲಿ ಕೊನೆಗೂ ಪೊಲೀಸರು ...