ಸಾಲದಿಂದ ಬೇಸತ್ತಿರುವ ಯುವಕನೊಬ್ಬ ಮನುಕುಲ ನಾಚುವಂತಹ ಘಟನೆಗೆ ಮುಂದಾಗಿದ್ದಾನೆ.ನನ್ನ ಕಿಡ್ನಿ ಸೇಲ್ಗಿದೆ ಎಂದು ಟೀ ಅಂಗಡಿ ಮುಂದೆ ಫಲಕ ಹಾಕಿರುವ ವಿಚಿತ್ರ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. 26 ವರ್ಷದ ಯುವಕ ವಿನೋದ್ ಕುಮಾರ್ ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ, ಮಧುರ ಟೀ ಸ್ಟಾಲ್ ಎಂಬ ಅಂಗಡಿ ಇಟ್ಟುಕೊಂಡಿದ್ದಾನೆ. ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ವಿನೋದ್ ಕುಮಾರ್ ಮನೆ ಕಟ್ಟಿಸುವುದು ಸೇರಿದಂತೆ ಹಲವಾರು ಕಾರಣಗಳಿಗೆ ಸಾಲ ಮಾಡಿಕೊಂಡಿದ್ದಾನಂತೆ.