ಬೆಂಗಳೂರು : ತಂಗಿಯನ್ನ ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಆಕೆ ಅಣ್ಣ ಲಾಂಗ್ ನಿಂದ ಹಲ್ಲೆ ಮಾಡಿರುವ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ. ಮಂಜುನಾಥ ಹಲ್ಲೆಗೊಳಗಾದ ಪ್ರಿಯಕರನಾಗಿದ್ದು, ಸೋಮ ಹಲ್ಲೆ ಮಾಡಿದ ಯುವಕ. ಮಂಜುನಾಥ, ಸೋಮ ಎಂಬುವನ ತಂಗಿಯನ್ನ ಪ್ರೀತಿಸುತ್ತಿದ್ದ. ಈ ವಿಷಯ ತಿಳಿದ ಸೋಮ ಅನೇಕ ಬಾರಿ ವಿರೋಧಿಸಿ, ಮಂಜುನಾಥನಿಗೆ ಎಚ್ಚರಿಕೆ ಕೂಡ ನೀಡಿದ್ದ. ಆದರೆ ಅದನ್ನ ಲೆಕ್ಕಿಸದ ಮಂಜುನಾಥ ತನ್ನ ಪ್ರೀತಿ ಮುಂದುವರೆಸಿದ್ದ. ಇದರಿಂದ ಕೋಪಗೊಂಡ ಸೋಮ ತನ್ನ ಸಹಚರರ