ವಿಜಯಪುರ : ಅಪ್ರಾಪ್ತ ಬಾಲಕಿಯ ಜನ್ಮ ದಿನಾಂಕ ತಿದ್ದುಪಡಿ ಮಾಡಲು ಒಪ್ಪದ ಶಾಲಾ ಮುಖ್ಯೋಪಾಧ್ಯಾಯರ ಮೇಲೆ ಬಾಲಕಿ ಪೋಷಕರು ಹಲ್ಲೆ ಮಾಡಿರುವ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ನಡೆದಿದೆ. ರಾಜು ಮೇಲಿನಮನೆ ಎಂಬವರು ತಮ್ಮ ಮಗಳ ವಿವಾಹವನ್ನ ತಮ್ಮ ಗ್ರಾಮದಲ್ಲಿ ನಡೆಯುತ್ತಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಮಾಡಲು ಮುಂದಾಗಿದ್ದರು. ಆದರೆ ಬಾಲಕಿ ಅಪ್ರಾಪ್ತಳಾದ ಹಿನ್ನಲೆಯಲ್ಲಿ ಆಕೆಯ ಜನ್ಮದಿನಾಂಕ ತಿದ್ದುಪಡಿ ಮಾಡಿಕೊಡಲು ಬಾಲಕಿಯ ಶಾಲೆಯ ಮುಖ್ಯೋಪಾಧ್ಯಾಯರನ್ನು ಒತ್ತಾಯಿಸಿದ್ದಾರೆ.