ಮೈಸೂರು ದಸರೆ ಈ ಬಾರಿ ರಾಜಮನೆತನಕ್ಕೆ ಬಹಳಷ್ಟು ವಿಶೇಷವಾಗಿದೆ.ಈ ಬಾರಿಯ ದಸರೆಗೆ ಯಧುವಂಶದ ಕುಡಿ ಸಾಕ್ಷಿಯಾಗಲಿದೆ. ಯಧುವೀರ್- ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್ ನರಸಿಂಹರಾಜ ಒಡೆಯರ್ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.9 ತಿಂಗಳಿನ ಆದ್ಯವೀರ್ ಗೆ ಇದು ಮೊದಲ ದಸರಾ ಆಗಿದೆ. ಮೈಸೂರು ರಾಜಮನೆತನಕ್ಕೆ ಕಳೆದ 6 ದಶಕಗಳಿಂದ ಸಂತಾನ ಭಾಗ್ಯ ಇರಲಿಲ್ಲ. ಕಳೆದ ವರ್ಷ ಪ್ರಮೋದಾದೇವಿ ಒಡೆಯರ್ ಅವರ ದತ್ತುಪುತ್ರ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ