ಸಂಸದ ಸುರೇಶ ಅಂಗಡಿ ಅವರು ಗ್ರಾಮೀಣ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲೆಗೆ ಸಂಬಂಧಪಟ್ಟಂತೆ ಒಟ್ಟು ಇಪ್ಪತ್ತೆಳು ಅಂಶಗಳೊಂದಿಗೆ ತಯಾರಿಸಲಾದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಸರಕು ಸಾಗಾಣಿಕೆ ವಿಮಾನ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು, ತಾಲೂಕಿಗೊಂದು ಸೋಲಾರ ಹಬ್ ನಿರ್ಮಾಣ, ಜಿಲ್ಲೆಯಲ್ಲಿ ಬೆಲ್ಲ ಸಂಶೋಧನಾ ಮತ್ತು ತರಬೇತಿ ಕೇಂದ್ರ ಸ್ಥಾಪನೆ, ಕಳಸಾ ಬಂಡೂರಿ ಮತ್ತು ಮಹಾದಾಯಿ ಮಲಪ್ರಭಾ ಜೋಡಣೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರತಿ ತಾಲೂಕಿಗೊಂದು ಹಣ್ಣು ಮತ್ತು ತರಕಾರಿ