ದೇವಸ್ಥಾನದ ಬಾವಿಯೊಂದರಲ್ಲಿ ಅಪರೂಪದ ಅತಿಥಿ ಬಿದ್ದ ಘಟನೆ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಶ್ರೀ ಮಹಾವಿಷ್ಣು ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಮಾವಿನಕಟ್ಟೆ ಎಂಬಲ್ಲಿ ದೇವಸ್ಥಾನದ ಕೆರೆಗೆ ಬೆಳಗ್ಗಿನ ಜಾವ ಕಾಡುಕೋಣದ ಮರಿಯೊಂದು ಬಿದ್ದ ಘಟನೆ ನಡೆದಿದೆ.ಈ ಭಾಗದಲ್ಲಿ ಕಾಡು ಕೋಣಗಳ ಸಂಚಾರ ಹೆಚ್ಚಿದ್ದು, ಸಂಚಾರದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣೆಯ ಕಾರ್ಯಚರಣೆಯಲ್ಲಿ ತೊಡಗಿದ್ರು. ನೂರಾರು ಮಂದಿ