ಪ್ರೀತಿಸಿ ಮದುವೆಯಾಗಿ 13 ವರ್ಷದ ನಂತರ ಮನೆಗೆ ಬಂದ ಮಹಿಳೆಗೆ ಸಹೋದರ ಮಾಡಿದ್ದೇನು ಗೊತ್ತಾ?

ಗದಗ| pavithra| Last Modified ಗುರುವಾರ, 27 ಸೆಪ್ಟಂಬರ್ 2018 (08:33 IST)
: ಇತ್ತೀಚೆಗೆ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದೀಗ 13 ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಮಹಿಳೆ ಹಾಗೂ ಆಕೆಯ ಪತಿಯನ್ನು ಆಕೆಯ ಸಹೋದರನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿರಹಟ್ಟಿ ತಾಲೂಕಿನ ಬಸಾಪುರದಲ್ಲಿ ನಡೆದಿದೆ.


ಅಶ್ರಫ್ ಅಲಿ ದೊಡ್ಡಮ್ಮನಿ(45), ಸೋಮವ್ವ (38) ಮೃತ ದುರ್ದೈವಿಗಳು. ಕಳೆದ 13 ವರ್ಷದ ಹಿಂದೆ ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಕಾರಣ ಮನೆ ಬಿಟ್ಟು ಬೇರೆ ಕಡೆ ಜೀವನ ನಡೆಸುತ್ತಿದ್ದರು.


13 ವರ್ಷದ ನಂತರ ಮಹಿಳೆ ತನ್ನ ಪಾಲಕರನ್ನ ನೋಡಲು ತವರಿಗೆ ಬಂದಿದ್ದರು. ಈ ವೇಳೆ ಮಹಿಳೆಯ ಸಹೋದರ ದೇವಪ್ಪ ಹೊಟ್ಟಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಶಿರಹಟ್ಟಿ ಪೊಲೀಸರಿಗೆ ಶರಣಾಗತಿಯಾಗಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :