ರಾಜಕೀಯ ಒತ್ತಡಕ್ಕೆ ಮಣಿದು ಪುಂಡ ಪೋಕರಿಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ನಿಯಮ ಉಲ್ಲಂಘಿಸಿ ಬಾಲಕಿಯರ ಸರ್ಕಾರಿ ಕಾಲೇಜು ಕಾಂಪೌಂಡ್ ಅನ್ನು ನಿಗದಿಗಿಂತ ಕಡಿಮೆ ಎತ್ತರ ನಿರ್ಮಿಸಿರೋ ಘಟನೆ ನಡೆದಿದೆ.ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಕಾಂಪೌಂಡ್ ನಿರ್ಮಾಣದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೆದ್ದಾರಿ ಅಗಲೀಕರಣದ ವೇಳೆ ಕಾಲೇಜಿನ ಹಳೆಯ ಕಾಂಪೌಂಡ್ ಒಡೆಯಲಾಗಿತ್ತು. ಕೆಶಿಪ್ ನಿಯಮದಂತೆ ಇದೀಗ ಮತ್ತೆ ಕಾಲೇಜಿಗೆ