ಅಂಗನವಾಡಿಗೆ ತಡವಾಗಿ ಬಂದ ಪುಟ್ಟ ಮಗುವಿಗೆ ಸಹಾಯಕಿ ಮಾಡಿದ್ದೇನು ಗೊತ್ತಾ?

ಕೊಪ್ಪಳ| pavithra| Last Modified ಸೋಮವಾರ, 10 ಫೆಬ್ರವರಿ 2020 (11:15 IST)
: ಅಂಗನವಾಡಿಗೆ ತಡವಾಗಿ ಬಂದ ಮಗುವಿಗೆ ಸಹಾಯಕಿಯೊಬ್ಬಳು  ಹಿಗ್ಗಾಮಗ್ಗಾ ಥಳಿಸಿದ ಘಟನೆ ಕೊಪ್ಪಳದ ಕನಕಗಿರಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ.


ಗುಂಡೂರಿನ ವಾರ್ಡ್ ನಂಬರ್ 3ರ ಅಂಗನವಾಡಿಯಲ್ಲಿ ಪುಟ್ಟ ಮಗುವೊಂದು ತಡವಾಗಿ ಬಂದಿದೆ. ಇದರಿಂದ ಕೋಪಗೊಂಡ ಸಹಾಯಕಿ ಕೋಲಿನಿಂದ ಹೊಡೆದದ್ದಲ್ಲದೇ ಕೈಯಿಂದ  ಮಗುವಿನ ಕೆನ್ನೆಗೆ ಹಿಗ್ಗಾ ಮಗ್ಗಾ ಬಾರಿಸಿದ್ದಾಳೆ.


ಈ ದೃಶ್ಯ ವನ್ನು ಅಲ್ಲಿದ್ದವರು ಸೆರೆಹಿಡಿದಿದ್ದು, ಈ ವಿಡಿಯೋ ಈಗ ವೈರಲ್ ಆದ ಹಿನ್ನಲೆಯಲ್ಲಿ ಸಹಾಯಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :