ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ದಿನ ಫಿಕ್ಸ್ ಆಗಿರುವಂತೆ ಶಾಸಕರು ಒಂದೆಡೆ ಒತ್ತಡ ತಂತ್ರಕ್ಕೆ ಮೊರೆಹೋಗಿದ್ದರೆ, ಶಾಸಕರ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ಶಾಸಕರಿಗೆ ಸಚಿವಸ್ಥಾನ ಸಿಗಬೇಕೆಂದು ತರಹೇವಾರಿ ಕಾರ್ಯಗಳನ್ನು ಮಾಡುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್ ಅವರ ಪುತ್ರ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಅಜಯಸಿಂಗ್ ಗೆ ಸಚಿವ ಸ್ಥಾನ ಸಿಗಬೇಕು. ಹೀಗಂತ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಶಾಸಕ