ಮಂಡ್ಯ : ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದರಿಂದ ನೊಂದ ತಾಯಿಯೊಬ್ಬಳು ತನ್ನ ಎರಡು ಗಂಡು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸಂತೋಷ್ (2) ಹಾಗೂ ಸಾತ್ವಿಕ್ (7) ತಾಯಿಯಿಂದ ಹತ್ಯೆಯಾದ ದುರ್ದೈವಿ ಮಕ್ಕಳು. ಮಕ್ಕಳಿಗೆ ಯಾವಾಗಲೂ ಆರೋಗ್ಯ ಕೆಡುತ್ತಿದ್ದರಿಂದ ಬೇಸತ್ತ ತಾಯಿ ಪುಟ್ಟಮ್ಮ ತನ್ನ ಎರಡು ಮಕ್ಕಳನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ