ಚಾಕು ತೋರಿಸಿ ದೋಚುತಿದ್ದ ಹಳೇ ಕಳ್ಳರು ಏನಾದರು ಗೊತ್ತಾ?

ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2019 (13:50 IST)

ಕಳ್ಳರು ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ರು. ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ರು.  ಆದರೆ ಈಗ ಅಂದರ್ ಆಗಿದ್ದಾರೆ.

ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಮಾಂಗಲ್ಯಸರ ದೋಚಿ ಪರಾರಿಯಾಗಿದ್ದ ಮೂವರು ಹಳೇಕಳ್ಳರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ನಾಗವಾರದ ಸೈಫ್ ಖಾನ್ (28), ಗೋವಿಂದಪುರದ ನಯಾಬ್ ರಸುಲ್ (29), ಹೆಗಡೆ ನಗರದ ಸಬ್ದಾರ್ ಅಹಮದ್ ಅಲಿಯಾಸ್ ನೀಗ್ರೋ (29) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 9.5 ಲಕ್ಷ ರೂ. ಮೌಲ್ಯದ 175 ಗ್ರಾಂ ಚಿನ್ನಾಭರಣ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಬ್ಬಾಳದ ಎರಡು ಸರಗಳ್ಳತನ, ಒಂದು ಸುಲಿಗೆ, 2 ಕನ್ನಗಳವು, 2 ದ್ವಿಚಕ್ರ ವಾಹನ ಕಳವು, ನಂದಿನಿ ಲೇಔಟ್ ಒಂದು ಸುಲಿಗೆ, ಜಾಲಹಳ್ಳಿಯ ಒಂದು ಸರಗಳವು, ಹೆಚ್..ಎಲ್ ಒಂದು ಸುಲಿಗೆ ಸೇರಿ 12 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

ಆರೋಪಿಗಳು ಹಳೇಕಳ್ಳರಾಗಿದ್ದು, ಒಂಟಿಯಾಗಿ ಓಡಾಡುವವರನ್ನು ಬೆದರಿಸಿ, ಸುಲಿಗೆ ಮಾಡುತ್ತಿದ್ದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೆಹಲಿಯ ಹೋಟೆಲ್ ನಲ್ಲಿ ಅಗ್ನಿ ದುರಂತ; ಸಾವಿನ ಸಂಖ್ಯೆ 17ಕ್ಕೆ ಏರಿಕೆ

ನವದೆಹಲಿ : ಇಂದು ಮುಂಜಾನೆ ಕರೋಲ್​ ಭಾಗ್ ​ನಲ್ಲಿರುವ ಹೋಟೆಲ್​ ಅರ್ಪಿತ್​ ಪ್ಯಾಲೇಸ್​ನಲ್ಲಿ ಅಗ್ನಿ ದುರಂತ ...

news

420 ಎಂದಿದ್ದಕ್ಕೆ ಕ್ಷಮೆ ಕೇಳದಿದ್ರೆ ನಿಮ್ಮ ಹಗರಣಗಳನ್ನು ಬಿಚ್ಚಿಡುತ್ತೇನೆ- ರೇವಣ್ಣಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

ಬೆಂಗಳೂರು : ರೇಣುಕಾಚಾರ್ಯ 420 ಎಂದು ಹೆಚ್.ಡಿ.ರೇವಣ್ಣ ಅವರ ಹೇಳಿಕೆಗೆ ಇದೀಗ ಎಂ.ಪಿ.ರೇಣುಕಾಚಾರ್ಯ ...

news

ರಾಜ್ಯದಲ್ಲಿ ‘ಕರ್ನಾಟಕ ಜನತಾ ರಂಗ 'ಎಂಬ ಹೊಸ ಪಕ್ಷ ಸ್ಥಾಪನೆ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಿಂದ ಜನತೆ ಬೇಸತ್ತು ಹೋದ ...

news

ಅತೃಪ್ತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧ- ಸಿಎಂ ಭರವಸೆ

ಬೆಂಗಳೂರು : ಅತೃಪ್ತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ರೆಡಿ ಎಂದು ಸಿಎಂ ಕುಮಾರಸ್ವಾಮಿ ಅವರು ಭರವಸೆ ...