ಪ್ರೇಯಸಿ ಗರ್ಭಿಣಿ ಎಂದು ತಿಳಿದ ತಕ್ಷಣ ಪೊಲೀಸ್ ಅಧಿಕಾರಿಯ ಮಗ ಮಾಡಿದ್ದೇನು ಗೊತ್ತಾ?

ಕಲಬುರಗಿ, ಬುಧವಾರ, 11 ಸೆಪ್ಟಂಬರ್ 2019 (10:50 IST)

ಕಲಬುರಗಿ : ಪೊಲೀಸ್ ಅಧಿಕಾರಿಯ ಮಗನೊಬ್ಬ ಯುವತಿಯೊಬ್ಬಳನ್ನು ಪ್ರೀತಿಸಿ, ಗರ್ಭಿಣಿ ಮಾಡಿದ್ದಲ್ಲದೆ ಆಕೆಗೆ ಬಲವಂತವಾಗಿ ಮಾಡಿಸಿ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.




ರಾಜು ಪೂಜಾರಿ ಇಂತಹ ನೀಚ ಕೃತ್ಯ ಎಸಗಿದ ವ್ಯಕ್ತಿ. ಈತ ಕಲಬುರಗಿ ಫೈನ್ ಆರ್ಟ್ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ಮಾಡುತ್ತಿದ್ದ ಯುವತಿಯೊಬ್ಬಳನ್ನು ಲವ್ ಮಾಡಿ ಗರ್ಭಿಣಿ ಮಾಡಿದ್ದನು. ಯುವತಿ ಗರ್ಭಿಣಿ ಆಗಿರುವ ವಿಚಾರ ತಿಳಿದು ಬಲವಂತವಾಗಿ ಅಬಾರ್ಷನ್ ಮಾಡಿಸುವುದಕ್ಕೆ ಮುಂದಾಗಿದ್ದನು. ಆ ವೇಳೆ ಯುವತಿಗೆ ಹೇವಿ ಡೋಸ್ ಇಂಜೆಕ್ಷನ್ ಕೊಡಿಸಿದ ಹಿನ್ನಲೆಯಲ್ಲಿ ಗರ್ಭಪಾತದ ವೇಳೆ ಯುವತಿ ಮೃತಪಟ್ಟಿದ್ದಾಳೆ.

 



ಬಳಿಕ ಈತ ತೆಲಂಗಾಣದ ಜಹಿರಬಾದ್ ನ ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಬದಿ ಗುಂಡಿ ತೋಡಿ ಪೆಟ್ರೋಲ್ ಹಾಕಿ ಯುವತಿಯನ್ನು ಸುಟ್ಟು ಹಾಕಿದ್ದಾನೆ. ಇತ್ತ ಮಗಳು ನಾಪತ್ತೆಯಾದ ಹಿನ್ನಲೆಯಲ್ಲಿ ಆಕೆಯ ಪೋಷಕರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಯ ವೇಳೆ ಪೊಲೀಸರು ಆರೋಪಿ ರಾಜು ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಯುವತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವುದಾಗಿ ಬಾಯಿಬಿಟ್ಟಿದ್ದಾನೆ.




ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಒಕ್ಕಲಿಗ ಸಮುದಾಯದ ಪ್ರತಿಭಟನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ತಡೆಯಲು ಬಿಜೆಪಿ ರೂಪಿಸಿದೆ ಈ ತಂತ್ರ

ಬೆಂಗಳೂರು : ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರು ನಡೆಸುತ್ತಿರುವ ಪ್ರತಿಭಟನೆ ಜಾತಿ ಬಣ್ಣದ ತಿರುವು ...

news

ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರಿಂದ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ

ಬೆಂಗಳೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರು ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ...

news

ಯುವ ದಸರಾ ಉದ್ಘಾಟಿಸಲು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು?

ಬೆಂಗಳೂರು: ಈ ಬಾರಿ ಯುವ ದಸರಾ ಉದ್ಘಾಟನೆ ಮಾಡಲು ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ರಾಜ್ಯ ...

news

ಆರೇ ತಿಂಗಳಲ್ಲಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ನಟಿ ಊರ್ಮಿಳಾ ಮಾರ್ತೋಂಡ್ಕರ್

ನವದೆಹಲಿ: ಕಳೆದ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ನಟಿ ಊರ್ಮಿಳಾ ...