ಕೊಪ್ಪಳ : ವಿದ್ಯಾರ್ಥಿಗೆ ನೀತಿ ಪಾಠ ಹೇಳಬೇಕಾದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ಲವ್ ಮಾಡುವಂತೆ ಪೀಡಿಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಯಾರು ಇಲ್ಲದ ವೇಳೆ ವಿದ್ಯಾರ್ಥಿನಿಯನ್ನು ಸ್ಟಾಫ್ ರೂಮಿಗೆ ಕರೆದ ಶಿಕ್ಷಕ ತನ್ನನ್ನು ಲವ್ ಮಾಡು, ಪಪ್ಪಿ ಕೊಡು ಎಂದು ಪೀಡಿಸಿದ್ದಾನೆ. ಶಿಕ್ಷಕ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾಳೆ. ಪೋಷಕರು ಈ ಬಗ್ಗೆ ವಿಚಾರಿಸಿದಾಗ ವಿದ್ಯಾರ್ಥಿನಿ ಶಿಕ್ಷಕನ ವರ್ತನೆಯ ಬಗ್ಗೆ ಹೇಳಿದ್ದಾಳೆ.