ಬೆಂಗಳೂರು : ಬನ್ನೇರುಘಟ್ಟ ಕ್ರೀಡಾ ಸಾಮಗ್ರಿ ಮಾರಾಟ ಮಳಿಗೆಯ ಡ್ರೆಸ್ಸಿಂಗ್ ರೂಮಿನ ಕಿಂಡಿಯಲ್ಲಿ ಇಣುಕಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಘಟನೆ ಸ್ವಾಂತಂತ್ರ್ಯ ದಿನಾಚರಣೆ ದಿನ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ದೊಡ್ಡಕಮ್ಮನಹಳ್ಳಿ ನಿವಾಸಿ ಶಿವಕುಮಾರ್(26) ಎಂಬಾತ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು, ಇತ ಕ್ರೀಡಾ ಸಾಮಗ್ರಿ ಮಾರಾಟ ಮಳಿಗೆಯ ಡ್ರೆಸ್ಸಿಂಗ್ ರೂಂನ ಕಿಂಡಿಯಲ್ಲಿ ಇಣುಕಿ ನೋಡುತ್ತಿದ್ದ ವೇಳೆ ವೈದ್ಯೆಯೊಬ್ಬರ ಕೈಗೆ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ನಂತರ ಆತನನ್ನು ಪೊಲೀಸರ