ಆಶಾಢ ಮಾಸದ ಮೊದಲ ಏಕಾದಶಿಯಂದು ಉಡುಪಿಯ ಶ್ರೀ ಕೃಷ್ಣ ಮಠಗಳಲ್ಲಿ ತಪ್ತ ಮುದ್ರಾ ಧಾರಣೆ ಸಂಭ್ರಮ ಜೋರಾಗಿದೆ. ಉಡುಪಿಯ ಶ್ರಿಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ ನಡೆಯಿತು. ನಾನಾ ಕಡೆಗಳಿಂದ ಬಂದ ಭಕ್ತರು ತಪ್ತ ಮುದ್ರೆಯನ್ನು ಹಾಕಿಸಿಕೊಂಡ್ರು. ಸುದರ್ಶನ ಹೋಮವನ್ನು ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ.ತಪ್ತ ಅಂದರೆ ಕಾಯಿಸಿದ ವಿವಿಧ ಚಿಹ್ನೆಗಳ